ಅಕ್ಟೋಬರ್ ೨ ರಂದು ಮೈಸೂರಿಗೆ ದಸರಾ ಆನೆಗಳ ಆಗಮನ ಮೈಸೂರು,ಸೆಪ್ಟೆಂಬರ್,13,2020(..): ಅರಮನೆ ಆವರಣದಲ್ಲೇ ದಸರಾ ಆನೆಗಳ ತಾಲೀಮಿಗೆ ಸಿದ್ದತೆ ನಡೆಸಿದ್ದು, ಅಕ್ಟೋಬರ್ ೨ ರಂದು ಮೈಸೂರಿಗೆ ದಸರಾ ಆನೆಗಳು ಬರಲಿವೆ. ತಾಲೀಮಿಗೆ ಮಾರ್ಗ ಸಿದ್ಧಪಡಿಸಿದ ಅರಣ್ಯ ಇಲಾಖೆ. ತಾಲೀಮು ನಡೆಸುವ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಅರಮನೆ ಆಡಳಿತ ಮಂಡಳಿ ವತಿಯಿಂದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅಕ್ಟೋಬರ್ ೨ಕ್ಕೆ ದಸರಾ ಆನೆಗಳ ಆಗಮನ ಅಕ್ಟೋಬರ್ ೨ ರಂದು ಮೈಸೂರಿಗೆ ದಸರಾ ಆನೆಗಳು ಬರಲಿವೆ. ವೀರನಸಹೊಸಹಳ್ಳಿಯಿಂದ ನೇರವಾಗಿ ಅಭಿಮನ್ಯು ಮತ್ತು ತಂಡ ಅರಮನೆಗೆ ಬರಲಿವೆ. ಅಕ್ಟೋಬರ್ ೨ರಿಂದ ಅಕ್ಟೋಬರ್ ೨೪ರವರೆಗೂ ಆನೆಗಳಿಗೆ ತಾಲೀಮು ನಡೆಯಲಿದ್ದು, ಸರಕಾರವು ಅಭಿಮನ್ಯು ಜೊತೆ ಗೋಪಿ,ವಿಕ್ರಮ,ವಿಜಯ ಮತ್ತು ಕಾವೇರಿ ಆನೆಗಳು ಆಗಮನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. : ---