ಡ್ರಗ್ಸ್ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ : ಸಚಿವ ಬಸವರಾಜ್ ಬೊಮ್ಮಾಯಿ ಬೆಂಗಳೂರು, ಸೆಪ್ಟೆಂಬರ್, 13,2020(..): ಡ್ರಗ್ಸ್ ನಿಯಂತ್ರಣಕ್ಕೆ ಈ ವಾರ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು. ಸಿಸಿಬಿ ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮುಂದಿನ ವಾರ ಮಹತ್ವದ್ದು. ಗಡಿ ಜಿಲ್ಲೆಯ ಪೊಲೀಸರಿಗೆ ಎಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ. ಗುಪ್ತಚರ ಇಲಾಖೆಗೆ ಪೊಲಿಸರ ಬಳಕೆಗೂ ಸೂಚನೆ ನೀಡಲಾಗಿದೆ ಎಂದರು. ಎನ್ ಡಿ ಪಿ ಎಸ್ ಕಾಯಿದೆ ಜಾರಿಯಲ್ಲಿ ಕೆಲವು ತೊಂದರೆಗಳಿದ್ದು, ಈ ಕುರಿತು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. : ----