ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರಿಂದ ರೈತರ ಕುಂದುಕೊರತೆ ಸಭೆ ಮೈಸೂರು,ಸೆಪ್ಟೆಂಬರ್,13,2020(..): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಭಾನುವಾರ ರೈತರ ಕೊಂದುಕೊರತೆ ಸಭೆ ನಡೆಸಿದರು. ಎಚ್ ಡಿ ಕೋಟೆ ರಸ್ತೆಯ ಡಿ ಸಾಲುಂಡಿಯ ಮುರುಡ ಬಸವೇಶ್ವರ ದೇವಾಲಯದ ಅವರಣದಲ್ಲಿ ಸಭೆ ನಡಸಲಾಯಿತು. ಪ್ರಾಧಿಕಾರವು ಮುಡಾ ವ್ಯಾಪ್ತಿ ಬರುವ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದು, ಸಭೆಯಲ್ಲಿ ರಸ್ತೆ,ಯುಜಿಡಿ, ಹಾಗೂ ನೂತನ ಬಡಾವಣೆಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಲಾಯಿತು. ಈ ಸಂದರ್ಭ ನೂತನ ಬಡಾವಣೆಗಳ ತಾಂತ್ರಿಕ ಸಮಸ್ಯೆ ಗಳ ಬಗ್ಗೆ ರೈತರು ಅಳಲು ತೊಂಡಿಕೊಂಡರು. ಸಭೆಯಲ್ಲಿ ಮುಡಾ ಅಧಿಕಾರಿಗಳು, ಸಾಲುಂಡಿ,ಕೆರೆಹುಂಡಿ,ಧನಗಳ್ಳಿ ಭಾಗದ ರೈತರು ಭಾಗವಹಿಸಿದ್ದರು. : -- -’---