ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ? : ವಾಟಾಳ್ ನಾಗರಾಜ್ ಪ್ರಶ್ನೆ ಮೈಸೂರು,ಸೆಪ್ಟೆಂಬರ್,13,2020(..): ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ?. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿಎಂ ಯಡಿಯೂರಪ್ಪ ಸತ್ಯ ಒಪ್ಪಿಕೊಳ್ಳಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಟೀಕಿಸಿದರು. ಸ್ಯಾಂಡಲ್‌ವುಡ್ ನಟನಟಿಯರ ಮೇಲೆ‌ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಜೈಲು, ಆಸ್ಪತ್ರೆ ಅಂತ ಓಡಾಡುಸುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವ? ಗೃಹ ಸಚಿವ ಬೊಮ್ಮಾಯಿ, ಸಿಎಂ ಯಡಿಯೂರಪ್ಪ ಸತ್ಯ ಒಪ್ಪಿಕೊಳ್ಳಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಮಂತ್ರಿಗಳು, ಎಂಎಲ್‌ಎಗಳು ಯಾರು ಇಲ್ವಾ? ಗುಟ್ಕ ತಿಂದವರು ಪೊಲೀಸರು, ಅಧಿಕಾರಿಗಳು ಯಾರು ಇಲ್ವ? ಸರಿಯಾದ ತನಿಖೆ ಮಾಡದೆ’ ದಿಕ್ಕು ತಪ್ಪಿಸಿದ್ರೆ. ಮುಂದಿನ ಮಂಗಳವಾರ ನಾನೇ ಸಿಸಿಬಿ ಕಚೇರಿ ಮುಂದೆ ಸತ್ಯಾಗ್ರಹ ಮಾಡ್ತಿನಿ ಎಂದು ಎಚ್ಚರಿಕೆ ನೀಡಿದರು. ಎಂಎಲ್‌ಎ, ಸಚಿವರು ಯಾರಾದರೂ ಬಂಧಿಸಬೇಕು ಪೊಲೀಸರು ಈಗಾಗಲೇ ಕೆಲಸ ಮಾಡ್ತೀದ್ದಾರೆ. ಆದರೆ, ನಿಮಗೆ ಯಾರ ಒತ್ತಡ ಇದೆ ಹೇಳಿ. ಎಲ್ಲರ ಹೆಸರು ಬಹಿರಂಗವಾಗಬೇಕು’ ಇದು ನನ್ನ ಒತ್ತಾಯ. ಈ ಪ್ರಕರಣದಲ್ಲು ಜಮೀರ್ ಇದ್ರು ಬಂಧಿಸಬೇಕು. ಎಂಎಲ್‌ಎ ಇರಲಿ’ ಸಚಿವರೇ ಇರಲಿ ಎಲ್ಲರನ್ನ ಈ ಪ್ರಕರಣದಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು. :-- - -