ಜಮೀರ್ ಅಹ್ಮದ್ ಚಿಲ್ಲರೇ ಗಿರಾಕಿ: ಎರಡು ನಾಲಿಗೆಯ ವ್ಯಕ್ತಿ –ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿ… ದಾವಣಗೆರೆ,ಸೆಪ್ಟಂಬರ್, 12,2020(..):ಜಮೀರ್ ಅಹ್ಮದ್ ಖಾನ್‌ ಚಿಲ್ಲರೇ ಗಿರಾಕಿ, ಗುಜರಿ ಗಿರಾಕಿ. ಎರಡು ನಾಲಿಗೆಯ ವ್ಯಕ್ತಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು. ದಾವಣಗೆರೆಯಲ್ಲಿ ಇಂದು ಮಾತನಾಡಿದ ಶಾಸಕ ರೇಣುಕಾಚಾರ್ಯ, “ಜಮೀರ್ ಅಹ್ಮದ್ ಖಾನ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದ್ರೆ ಯಡಿಯೂರಪ್ಪ ಸಿಎಂ ಅಗಿದ್ದಾರೆ. ಜಮೀರ್ ಅವರು ವಾಚ್‌ಮನ್ ಆಗಲಿಲ್ಲ. ಅವರು ಒಂದು ರೀತಿ ಎರಡು ನಾಲಿಗೆ ವ್ಯಕ್ತಿ. ಜಮೀರ್ ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು. ಡ್ರಗ್ಸ್ ವಿಚಾರದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಮ್ಮ ಸರಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರ ಬರಲಿದೆ ಎಂದು ರೇಣುಕಾಚಾರ್ಯ ತಿಳಿಸಿದರು. : - --