ಮೈಸೂರಿನಲ್ಲಿ ಉರಗತಜ್ಞ ಸ್ನೇಕ್ ಶ್ಯಾಮ್ ಅವರಿಂದ ಬಾರಿ ಗಾತ್ರದ ಹೆಬ್ಬಾವು ಸೆರೆ ಮೈಸೂರು,ಸೆಪ್ಟೆಂಬರ್,13,2020(..): ಮೈಸೂರಿನಲ್ಲಿ ಬಾರಿ ಗಾತ್ರದ ಹೆಬ್ಬಾವು ಸೆರೆ ಹಿಡಿಯಲಾಯಿತು. ಕುವೆಂಪು ನಗರ ಎಂ.ಬ್ಲಾಕ್ ಬಳಿ ಬೃಹತ್ ಗಾತ್ರದ ಹಾವು ನೋಡಿ ಸಾರ್ವಜನಿಕರು ಬೆಚ್ಚಿಬಿದ್ದರು. ಈ ಸಂದರ್ಭ ಕೂಡಲೇ ಸ್ನೇಕ್ ಶ್ಯಾಮ್ ಗೆ ಕರೆಮಾಡಿ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಉರಗತಜ್ಞ ಸ್ನೇಕ್ ಶ್ಯಾಮ್ ಹಾಗೂ ಪುತ್ರ ಸೂರ್ಯ ಅವರು ಹೆಬ್ಬಾವು ರಕ್ಷಣೆ ಮಾಡಿದರು. ಬಳಿಕ ಸೆರೆ ಹಿಡಿದ ಆ ಹೆಬ್ಬಾವುವನ್ನು ಸುರಕ್ಷಿತ ಪ್ರದೇಶಕ್ಕೆ ರವಾನೆ ಮಾಡಲಾಯಿತು. ನಗರದ ಹೃದಯ ಭಾಗದಲ್ಲಿ‌ ಹೆಬ್ಬಾವು ನೋಡಿ ಆತಂಕಗೊಂಡಿದ್ದ ಸಾರ್ವಜನಿಕರು ಹೆಬ್ಬಾವು ರಕ್ಷಣೆಯಿಂದಾಗಿ ಸಮಾಧಾನಗೊಂಡರು. : -----