ಡ್ರಗ್ಸ್ ದಂಧೆ ವಿಚಾರ: ಉನ್ನತ ಮಟ್ಟದ ತನಿಖೆ ಮತ್ತು ಶಿಕ್ಷೆ ಪ್ರಮಾಣ ಕಠಿಣವಾಗಬೇಕು- ಸಚಿವ ಹೆಚ್. ನಾಗೇಶ್… ಕೋಲಾರ,ಸೆಪ್ಟಂಬರ್, 11,2020(..):ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಶಿಕ್ಷೆ ಪ್ರಮಾಣ ಕಠಿಣವಾಗಿರಬೇಕು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ. ಕೋಲಾರದಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ನಾಗೇಶ್, ವಿದ್ಯಾರ್ಥಿಗಳು ಡ್ರಗ್ಸ್ ಗೆ ಅಡಿಕ್ಟ್ ಆಗುತ್ತಿರುವುದು ಬೇಸರ ತರಿಸುತ್ತೆ. ಹೀಗಾಗಿ ಡ್ರಗ್ಸ್ ದಂಧೆ ಹಿಂದಿನಿಂದಲೂ ಇದೆ. ಹೀಗಾಗಿ ಡ್ರಗ್ಸ್ ದಂಧೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಶಿಕ್ಷೆ ಪ್ರಮಾಣ ಕಠಿಣವಾಗಿರಬೇಕು ಎಂದರು. ಬಿಎಸ್ ಯಡಿಯೂರಪ್ಪ ಮೂರು ವರ್ಷಗಳ ಅವಧಿಗೂ ಸಿಎಂ ಆಗಿರುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಇದು ಕೇವಲ ಊಹಾಪೂಹ. ಬಿಜೆಪಿಯಲ್ಲಿ ಒಗ್ಗಟಿದೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಚಿವ ನಾಗೇಶ್ ತಿಳಿಸಿದರು. : –- - - -. .