ಬ್ಲೂ ಫಿಲಂ ನೋಡುವ ಅಡಿಕ್ಷನ್‌ ಇರುವವರು ರಾಜ್ಯದ ಡಿಸಿಎಂ-ಲಕ್ಷ್ಮಣ್ ಸವದಿ ವಿರುದ್ಧ ಶಾಸಕ ಸಾ.ರಾ ಮಹೇಶ್ ವ್ಯಂಗ್ಯ… ಮೈಸೂರು,ಸೆಪ್ಟಂಬರ್,11,2020(..): ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದೇ ಡ್ರಗ್ಸ್‌ ದಂಧೆಕೋರರು ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೋಡಿ ನಗು ಬಂತು ಎಂದು ಟೀಕಿಸಿದ್ದ ಡಿಸಿಎಂ ಲಕ್ಷ್ಮಣ್ ಸವದಿಗೆ ಶಾಸಕ ಸಾ.ರಾ ಮಹೇಶ್ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಟಾಂಗ್ ಕೊಟ್ಟಿರುವ ಮಾಜಿ ಸಚಿವ ಸಾ.ರಾ ಮಹೇಶ್, ಡ್ರಗ್ಸ್ ದಂಧೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಹೆಚ್.ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ್ ಸವದಿಗೆ ನಗು ತರಿಸುತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್‌ ಇರುವವರು ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ಜನರಿಗೆ ನಗು, ದುಃಖ ಬಂದಿತ್ತು. ಅಸಲಿಗೆ ಎಲ್ಲವೂ ವ್ಯಸನವೇ, ಡ್ರಗ್ಸ್ ಆದರೂ, ಬ್ಲೂ ಫಿಲಂ ಆದರೂ….. ಎಂದು ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ದ ವ್ಯಂಗ್ಯವಾಡಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದೇ ಡ್ರಗ್ಸ್‌ ದಂಧೆಕೋರರು ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೋಡಿ ನಗು ಬಂತು. ಅವರ ಮಾತು, ಕುಣಿಯಲು ಬರದವರು ನೆಲ ಡೊಂಕು ಎನ್ನುವಂತಿದೆʼಎಂದು ಲಕ್ಷ್ಮಣ ಸವದಿ ಟೀಕಿಸಿದ್ದರು. 2012ರಲ್ಲಿ ಸದನ ನಡೆಯುತ್ತಿರುವಾಗಲೇ ಬ್ಲೂ ಫಿಲಂ ನೋಡಿದ ಆರೋಪ ಲಕ್ಷ್ಮಣ್ ಸವದಿ ಅವರ ಮೇಲೆ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಈ ವಿಚಾರವನ್ನು ಇಟ್ಟುಕೊಂಡು ಸಾ.ರಾ.ಮಹೇಶ್‌ ಲೇವಡಿ ಮಾಡಿದ್ದಾರೆ. : – – - - -.