ವಿ.ಸೋಮಣ್ಣ ಡೈನಾಮಿಕ್ ಮಂತ್ರಿ : ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶಂಸೆ ಹಾಸನ,ಸೆಪ್ಟೆಂಬರ್,11,2020(..): ರಾಜ್ಯದಲ್ಲಿ ವಿ.ಸೋಮಣ್ಣ ಡೈನಾಮಿಕ್ ಮಂತ್ರಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೊಗಳಿದರು. ಹಾಸನದಲ್ಲಿ ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿ.ಸೋಮಣ್ಣ ಅವರನ್ನು ಡೈನಾಮಿಕ್ ಮಂತ್ರಿ ಎಂದು ಎಚ್.ಡಿ.ರೇವಣ್ಣ ಹೊಗಳಿದರು. ಈ ಸಂದರ್ಭ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು. ರೇವಣ್ಣ ಅಂವರಿಂದಲೂ ಸ್ವಲ್ಪ ಕಲಿತ್ತಿದ್ದೇನೆ ಎಂದರು. ಹಾಗೆಯೇ ಶಾಸಕ ಪ್ರೀತಂಗೌಡ ಅವರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆಲ್ಲಿ. ಜನರು ಮತ್ತೆ ನಿಮ್ಮನ್ನು ಆಶೀರ್ವದಿಸಿ ಅಧಿಕಾರ ನೀಡುತ್ತಾರೆ ಎಂದು ಕಿವಿಮಾತು ಹೇಳಿದರು. : .----- -