ಸೆ.12 ರಂದು ಬೆಂಗಳೂರಿನಿಂದ ಮೈಸೂರಿಗೆ ಮೋಟಾರ್ ಸೈಕಲ್ ರ್ಯಾಲಿ… ಬೆಂಗಳೂರು,ಸೆಪ್ಟಂಬರ್,11,2020(..):ಕರ್ನಾಟಕ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸೆಪ್ಟಂಬರ್ 12ರಂದು ಬೆಂಗಳೂರಿನಿಂದ ಮೈಸೂರಿಗೆ ಮೋಟಾರ್ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ವೇದಿಕೆ (ಕೆಟಿಎಫ್) 2020 ರ ಸೆಪ್ಟೆಂಬರ್ 12 ರ ಶನಿವಾರ ‘ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಮೋಟಾರ್ ಸೈಕಲ್ ರ್ಯಾಲಿ ಹಮ್ಮಿಕೊಂಡಿದೆ. ಮೋಟಾರ್ ಸೈಕಲ್ ರ್ಯಾಲಿಯು ಬೆಂಗಳೂರಿನ ಯುಬಿ ಸಿಟಿಯಿಂದ ಹೊರಟು ಮೈಸೂರು ತಲುಪಲಿದೆ. ಕೆಟಿಎಫ್, ಪ್ರೆಸ್ಟೀಜ್ ಓಕ್ವುಡ್ ಮತ್ತು ರಾಯಲ್ ಆರ್ಕಿಡ್ ಹೋಟೆಲ್‌ ಗಳ ಪ್ರಾಯೋಜಕತ್ವದಲ್ಲಿ ಈ ಮೋಟಾರ್ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ. ಸಾಮಾಜಿಕ ಅಂತರ ಮತ್ತು ಸ್ವ-ಸುರಕ್ಷತೆಯ ಹೊಸ ನಿಯಮಗಳನ್ನು ಅನುಸರಿಸಿದರೆ ಪ್ರವಾಸಿ ತಾಣಗಳಿಗೆ ಪ್ರಯಾಣಿಸಲು ಸುರಕ್ಷಿತವಾಗಿದೆ ಎಂಬ ಅರಿವನ್ನು ಮೂಡಿಸಲು ಮತ್ತು ಪ್ರಚಾರ ಮಾಡಲು ಈ ಸಾಂಕೇತಿಕ ರ್ಯಾಲಿಯನ್ನು ಆಯೋಜಿಸಲಾಗಿದೆ. ರ್ಯಾಲಿಯಲ್ಲಿ ಇಂಡಿಯನ್ ಮೋಟಾರ್‌ ಸೈಕಲ್ ರೈಡರ್ಸ್ ಗ್ರೂಪ್ ನವರು ಭಾಗವಹಿಸುವಹಿಸಲಿದ್ದಾರೆ. ರ್ಯಾಲಿ ಹೊರಡುವ ವಿವರ ದಿನಾಂಕ: 2020 ರ ಸೆಪ್ಟೆಂಬರ್ 12 ರ ಶನಿವಾರ ಸಮಯ: ಬೆಳಿಗ್ಗೆ 7:00 ಸ್ಥಳ: ಪ್ರೆಸ್ಟೀಜ್ ಓಕ್ವುಡ್, ಯು ಬಿ ಸಿಟಿ, ಬೆಂಗಳೂರು. ಹೆಚ್ಚಿನ ಮಾಹಿತಿಗೆ ಶ್ರೀ ರವಿ+919901909419 ಇವರನ್ನು ಸಂಪರ್ಕಿಸಬಹುದು. : – – – 12-