ಆರೋಪ ಸಾಬೀತಾದರೆ ನನ್ನ ಆಸ್ತಿ ಸರ್ಕಾರಕ್ಕೆ ಬರೆದುಕೊಡುವೆ : ಶಾಸಕ ಜಮೀರ್ ಅಹ್ಮದ್ ಖಾನ್ ಬೆಂಗಳೂರು,ಸೆಪ್ಟೆಂಬರ್, 11,2020(..): ನಟಿ ಸಂಜನಾ ಗಲ್ರಾನಿ ಅವರನ್ನು ಬೆಂಗಳೂರಿನಲ್ಲು ನೋಡಿಲ್ಲ, ಶ್ರೀಲಂಕಾದಲ್ಲೂ ನೋಡಿಲ್ಲ. ನನ್ನ ಮೇಲಿನ ಆರೋಪ ಸಾಬೀತಾದರೆ ನನ್ನ ಆಸ್ತಿಯನ್ನು ಸರಕಾರಕ್ಕೆ ಬರೆದುಕೊಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಕ್ರೋಶವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಪ್ರಶಾಂತ ಸಂಬರಗಿ ಮಾಡಿದ ಆರೋಪದ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಿಸಿ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಪ್ರಶಾಂತ ಸಂಬರಗಿ ಕಾಂಜಿಪಿಂಜಿ. ನನ್ನ ಮೇಲಿನ ಆರೋಪ ಸಾಬೀತಾದರೆ ನನ್ನ ಆಸ್ತಿಯನ್ನು ಸರಕಾರಕ್ಕೆ ಬರೆದುಕೊಡ್ತೀನಿ ಎಂದು ಕಿಡಿಕಾರಿದ್ದಾರೆ. ಸಂಜನಾರನ್ನು ಬೆಂಗಳೂರಿನ್ಲಲಿ ನೋಡಿಲ್ಲ. ಶ್ರೀಲಂಕಾದಲ್ಲೂ ನೋಡಿಲ್ಲ. ಏರ್ ಪೋರ್ಟ್, ಬಸ್ ಸ್ಟ್ಯಾಂಡ್ ಎಲ್ಲಿಯೂ ನೋಡಿಲ್ಲ. ಈಗ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ನನ್ನ ಮೇಲಿನ ಆರೋಪ ಕುರಿತಂತೆ ಸೂಕ್ತ ತನಿಖೆ ನಡೆಸುವಂತೆ ಬಿಎಸ್ ವೈ ಅವರಿಗೆ ಒತ್ತಾಯಿಸುತ್ತೇನೆ ಎಂದರು. : ------