ದೇವಾಲಯದಲ್ಲಿ ದರೋಡೆಕೋರರಿಂದ ಮೂವರ ಹತ್ಯೆ ಕೇಸ್: ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರು, ಸೆಪ್ಟೆಂಬರ್,11,2020(..): ಮಂಡ್ಯದ ಅರ್ಕೇಶ್ವರ ದೇವಾಲಯದಲ್ಲಿ ದರೋಡೆಕೋರರಿಂದ ಹತ್ಯೆಯಾದ ಮೂವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಘೋಷಿಸಿದ್ದಾರೆ. ಅರ್ಚಕ ಸೇರಿದಂತೆ ಮೂವರ ಹತ್ಯೆಯಿಂದ ನೋವಾಗಿದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮಂಡ್ಯದ ಅರಕೇಶ್ವರ ದೇವಸ್ಥಾನದಲ್ಲಿ ಕನ್ನಹಾಕಿ ಹುಂಡಿ ದೋಚಿದ ದುಷ್ಕರ್ಮಿಗಳು ಈ ವೇಳೆ ಅರ್ಚಕ ಹಾಗೂ ಕಾವಲುಗಾರರಾದ ಗಣೇಶ, ಪ್ರಕಾಶ, ಆನಂದ ಮೂವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು. : --5 --- ..