ಭೂ ಸ್ವಾಧೀನಪಡಿಸಿಕೊಂಡ ಸ್ಥಳಕ್ಕೆ ಮುಡಾದಿಂದ ಫಲಕ ಅಳವಡಿಕೆ: ಒತ್ತುವರಿ ಮಾಡಿಕೊಂಡಿದ್ದ ನಿವೇಶನ ತೆರವು… ಮೈಸೂರು,ಸೆಪ್ಟಂಬರ್,10,2020(..): ಪರಸ್ಪರ ಒಪ್ಪಂದದ ಮೂಲಕ ಮೈಸೂರಿನ ಸಾತಗಳ್ಳಿ ಬಳಿ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲಾದ ಭೂಪ್ರದೇಶದ ಜಾಗಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಮಫಲಕ ಅಳವಡಿಸಲಾಯಿತು. ಸಾತಗಳ್ಳಿಯ ಸ.ನಂ-68/1,2,3 ಜಮೀನನ್ನು ಮುಡಾ ಪರಸ್ಪರ ಒಪ್ಪಂದದ ಮೂಲಕ ಭೂ ಸ್ವಾಧೀನಪಡಿಸಿಕೊಂಡು ಸಂಬಂಧ ಪಟ್ಟ ಮಾಲೀಕರಿಗೆ ಪರಿಹಾರ ಪಾವತಿಸಿದೆ. ಈ ಜಾಗ ಸುಮಾರು 3 ಎಕರೆ27 ಗುಂಟೆ ಇದ್ದು ಈ ಭೂ ಪ್ರದೇಶವನ್ನು ಭಾಗಶಃ ಸಾತಗಳ್ಳಿ ಬಡಾವಣೆ ನಿರ್ಮಾಣಕ್ಕೆ ಉಪಯೋಗಿಸಲು ಮುಡಾ ಮುಂದಾಗಿದೆ. ಇನ್ನು ಇಂದು ಈ ಸ್ಥಳಕ್ಕೆ ಮುಡಾ ಆಯುಕ್ತ ಡಿ.ಬಿ ನಟೇಶ್ ಅವರ ನೇತೃತ್ವದಲ್ಲಿ ನಾಮಫಲಕ ಅಳವಡಿಸಲಾಯಿತು. ಈ ವೇಳೆ ಅಭಿಯಂತರಾದ ಶಂಕರ್ ಸೇರಿ ಹಲವರು ಉಪಸ್ಥಿತರಿದ್ದರು. ಹಾಗೆಯೇ ಕುವೆಂಪು ನಗರ ಬಡಾವಣೆ ಪಡುವಣ ರಸ್ತೆ ಹತ್ತಿರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಮೂರು ನಿವೇಶನಗಳನ್ನು ಮುಡಾ ವತಿಯಿಂದ ತೆರುವು ಮಾಡಲಾಯಿತು. ಸುಮಾರು 1 ಕೋಟಿ ಬೆಲೆ ಬಾಳುವ ಮುಡಾಗೆ ಸೇರಿದ್ದ ಈ ಮೂರು ನಿವೇಶನಗಳನ್ನು ತೆರವು ಮಾಡಲಾಯಿತು. ಈ ವೇಳೇ ವಲಯ ಅಧಿಕಾರಿ ನಾಗೇಶ್, ನಟೇಶ್ ಸಿಬ್ಬಂದಿಗಳು ಉಪಸ್ಥಿತರಿದ್ದರು. : – – –- -