ಬಾರಿ ಮಳೆಯಿಂದಾಗಿ ರಾಜಕಾಲುವೆ ಒಡೆದು ಮನೆಗಳಿಗೆ ನುಗ್ಗಿದ ನೀರು… ಬೆಂಗಳೂರು,ಸೆಪ್ಟಂಬರ್,10,2020(..):ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ನಾಯಂಡಹಳ್ಳಿಯ ಪ್ರಮೋದ್ ಲೇಔಟ್ ನಲ್ಲಿ ರಾಜಕಾಲುವೆ ಒಡೆದು ಅಲ್ಲಿಯ ಮನೆಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ. ಮಳೆ ರಾಜಕಾಲುವೆ ಒಡೆದ ಪರಿಣಾಮ ನಾಯಂಡಹಳ್ಳಿಯ ಪ್ರಮೋದ್ ಲೇಔಟಿನಲ್ಲಿ ಮನೆಗಳಿಗೆ 8 ಅಡಿ ನೀರು ನುಗ್ಗಿದ್ದು, ಅಪಾರ ಪ್ರಮಾಣದ ವಸ್ತುಗಳಿಗೆ ಹಾನಿಯುಂಟಾಗಿದೆ. ಇನ್ನು ರಾತ್ರಿ ಸಮಯದಲ್ಲಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಜನರು ಹೊರಗಡೆ ಬಂದಿದ್ದಾರೆ. ಕಾರು ಸ್ಕೂಟರ್ ಗಳು ಸಹ ಮಳೆ ನೀರಿಗೆ ಸಿಲುಕಿದ್ದು, ರಾತ್ರಿಯೇ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇಷ್ಟೆಲ್ಲಾ ಘಟನೆಗಳಾದರೂ ಸಹ ಇದುವರೆಗೂ ಯಾವುದೇ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಸಂಬಂಧಪಟ್ಟ ಕೆಇಬಿ ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. : - -- –