ದಿ. ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಗುದ್ಧಲಿ ಪೂಜೆಗೆ ಸಿಎಂ ಬಿಎಸ್ ವೈಗೆ ಆಹ್ವಾನ ನೀಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್.. ಬೆಂಗಳೂರು,ಸೆಪ್ಟಂಬರ್,9,2020(..): ದಿ. ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಇದೀಗ ಕಾಲ ಕೂಡಿ ಬಂದಿದ್ದು, ಡಾ. ವಿಷ್ಣು ಅವರ ಅಭಿಮಾನಿಗಳ ಕನಸು ನನಸಾಗುತ್ತಿದೆ. ಸೆಪ್ಟಂಬರ್ 15 ರಂದು ನಟ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಲಿದೆ. ಈ ಸಂಬಂಧ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ದನ್ , ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಸೆ.15 ರಂದು ನಡೆಯುವ ದಿ. ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆಯನ್ನು ನೆರವೇರಿಸುವಂತೆ ಸಿಎಂಗೆ ಆಹ್ವಾನ ನೀಡಿದರು. ಇದೇ ವೇಳೆ ಭಾರತಿ ವಿಷ್ಣುವರ್ಧನ್ ಅವರಿಗೆ ನಟ ಅನಿರುದ್ಧ್ ಸಾಥ್ ನೀಡಿದರು. ಹಲವು ವರ್ಷಗಳ ಬಳಿಕ ದಿವಂಗತ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗುತ್ತಿದ್ದು ಡಾ.ವಿಷ್ಣುವರ್ದನ್ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. : –- – - - – .