ಚಿಕ್ಕಣ್ಣಗೆ ಹೀರೋ ಆಗಿ ಪ್ರಮೋಷನ್ ಸಿಕ್ತು ! ಬೆಂಗಳೂರು, ಸೆಪ್ಟೆಂಬರ್ 09, 2020 (..): ಹೊಸ ಚಿತ್ರಕ್ಕೆ ಚಿಕ್ಕಣ್ಣ ಅವರೇ ಹೀರೋ ಎಂದು ಘೋಷಣೆಗಾಗಿದೆ. ‘ಬಾಂಬೆ ಮಿಠಾಯಿ’, ‘ಡಬಲ್ ಎಂಜಿನ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರಮೋಹನ್ ಈ ಹೊಸ ಘೋಷಣೆ ಮಾಡಿದ್ದಾರೆ. ಕಾಮಿಡಿ ಎಂಟರ್‌ಟೇನರ್ ಮತ್ತು ಒಂದು ಫ್ಯಾಮಿಲಿ ಡ್ರಾಮಾ ಸಿನಿಮಾ.‌ ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಾಯಕಿಯ ಪಾತ್ರಕ್ಕಾಗಿ ಈಗಾಗಲೇ ಆಡಿಷನ್ ಮಾಡಿದ್ದು, ಹೊಸಬರಿಗೆ ಅವಕಾಶ ದೊರೆಯಲಿದೆ.ಚಿಕ್ಕಣ್ಣ ಜತೆ ರಾಕ್‌ಲೈನ್ ಸುಧಾಕರ್, ರವಿಶಂಕರ್‌ಗೌಡ, ಸಾಧುಕೋಕಿಲಾ ಸೇರಿದಂತೆ ಹಲವರು ನಟಿಸಲಿದ್ದಾರೆ.