ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ-ಸಂಜನಾ ‘ಕೋಳಿ ಜಗಳ’ ! ಬೆಂಗಳೂರು, ಸೆಪ್ಟೆಂಬರ್ 09, 2020 (..): ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಸಂಜನಾ ಮತ್ತು ರಾಗಿಣಿ ನಡುವೆ ಜಗಳ ನಡೆದಿದೆ. ಸ್ಯಾಂಡಲ್‌ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಪ್ರಕರಣದ ಸಂಬಂಧ ಕಸ್ಟಡಿಯಲ್ಲಿರುವ ಇಬ್ಬರಿಗೆ ಜಗಳ ನಡೆದಿದೆ.ಇಬ್ಬರೂ ನಟಿಯರು ಒಂದೇ ರೂಮಿನಲ್ಲಿರಬೇಕಾದ ಜರೂರತ್ತು ಎದುರಾಗಿದೆ. ಆ ವೇಳೆ ರೂಮ್‌ನಲ್ಲಿ ಲೈಟ್ ಆಫ್ ಮಾಡುವ ವಿಚಾರಕ್ಕೆ ಇಬ್ಬರೂ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೈಟ್ ಆಫ್ ಮಾಡಿದ್ದಕ್ಕೆ ಮತ್ತೊಬ್ಬರು ಕ್ಯಾತೆ ತೆಗೆದಿದ್ದಾರೆ. ಅಗ ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಈ ನಡುವೆ ರಾಗಿಣಿ ಮತ್ತು ಸಂಜನಾ ಕೊಠಡಿಯೊಳಗೆ ಮಹಿಳಾ ಪೊಲೀಸ್ ಸಿಬ್ಬಂದಿಯೂ ವಾಸ್ತವ್ಯ ಹೂಡಿದ್ದಾರೆ.