ರೇಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ- ಗವರ್ನರ್ ಶಕ್ತಿಕಾಂತ್ ದಾಸ್. ನವದೆಹಲಿ,ಏಪ್ರಿಲ್,4,2024 (..):ರೇಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದಾರೆ. ಸತತ ಏಳನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಆರ್ ಬಿಐ ನಿರ್ಧರಿಸಿದೆ. ಕಳೆದ ಒಂದು ವರ್ಷದಿಂದ ಬಡ್ಡಿದರ ಶೇ. 6.5ರಷ್ಟಿದ್ದು ಈ ದರವೇ ಮುಂದುವರಿಯಲಿದೆ. ಹಾಗೆಯೇ ಗೃಹ ಸಾಲ ಬಡ್ಡಿದರದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಎಂಪಿಸಿ ಸಭೆಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೂ ಸೇರಿ ಭಾಗವಹಿಸಿದ್ದ 6 ಮಂದಿ ಪೈಕಿ ಐವರು ರೆಪೋ ದರ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿದ್ದಾರೆ ಎನ್ನಲಾಗಿದೆ . 5:1 ಮತಗಳು ಈ ನಿರ್ಧಾರದ ಪರವಾಗಿ ಬಂದಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಇರುವ ಶೇ. 6.5ರ ಬಡ್ಡಿದರವೇ ಮುಂದುವರಿಯಲಿದೆ. : , , .