ಬೆಂಗಳೂರಿನ ಕೆಐಎಬಿನಲ್ಲಿ 1 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ.. ಬೆಂಗಳೂರು,ಸೆಪ್ಟಂಬರ್,9,2020(..): ಬೆಲ್ಜಿಯಂನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಅನ್ನು ಏರ್ ಕೆಐಎಬಿನಲ್ಲಿ ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾಸಾಜ್ ಮಾಡುವ ಮಷಿನ್ ಪಾರ್ಸಲ್ ನಲ್ಲಿ ಎಂಡಿಎಂಎ/ ಎಕ್ಸ್ ಟಸಿ ಮಾತ್ರೆಗಳನ್ನ ಬೆಲ್ಜಿಯಂನಿಂದ ಇಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಏರ್ ಪೋರ್ಟ್ ನಲ್ಲಿ ತಪಾಸಣೆ ನಡೆಸಿದ ಕಸ್ಟಮ್ ಅಧಿಕಾರಿಗಳು ಸಾಗಿಸಲಾಗುತ್ತಿದ್ದ ಎಂಡಿಎಂಎ/ ಎಕ್ಸ್ ಟಸಿ ಮಾತ್ರೆಗಳನ್ನ ಸೀಜ್ ಮಾಡಿದ್ದಾರೆ. ಈ ಮಾದಕ ವಸ್ತುಗಳು ಸುಮಾರು 1 ಕೋಟಿಗೂ ಅಧಿಕ ಮೌಲ್ಯವುಳ್ಳದ್ದು ಎನ್ನಲಾಗಿದೆ. : - – 1 – - -