ರಾಜಕಾಲುವೆ ಮುಚ್ಚಿದ ಹಿನ್ನೆಲೆ ಮನೆಗೆ ನುಗ್ಗಿದ ನೀರು: ಕೇಳುವವರಿಲ್ಲ ನಿವಾಸಿಗಳ ಗೋಳು.. ಮೈಸೂರು,ಸೆಪ್ಟಂಬರ್,9,2020(..): ಮಳೆಯಾದ ಹಿನ್ನೆಲೆ ಮೈಸೂರು ತಾಲ್ಲೂಕಿನ ಶೆಟ್ಟಿನಾಯಕನಹಳ್ಳಿಯ ಕೆಲ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಈ ನಡುವೆ ರಾಜಕಾಲುವೆ ಮುಚ್ಚಿದ ಹಿನ್ನೆಲೆ ಅಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಿದ್ದು ಮನೆ ಜಲಾವೃತವಾಗಿ ನಿವಾಸಿಗಳು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಪ್ರಭಾವಿ ವ್ಯಕ್ತಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದು ರಾಜಕಾಲುವೆಯನ್ನೇ ರಸ್ತೆಯನ್ನಾಗಿ ಒತ್ತುವರಿಮಾಡಿಕೊಂಡ ಆರೋಪ ಕೇಳಿಬಂದಿದೆ. ಇನ್ನು ರಾಜಕಾಲುವೆ ಒತ್ತುವರಿ ಹಿನ್ನೆಲೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ಶೆಟ್ಟನಾಯಕನ ಹಳ್ಳಿ ಗ್ರಾಮದ ನಿವಾಸಿಗಳ ಮನೆಗೆ ಮಳೆ ನೀರು ನುಗ್ಗಿದ್ದು ಮನೆಯಲ್ಲಿ ಮಲಗಲೂ ಜಾಗವಿಲ್ಲದೆ ನಿವಾಸಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. : - - -