ಮೈಸೂರು ಕಾರಾಗೃಹದಲ್ಲಿ ಕೈದಿ ಸಾವು… ಮೈಸೂರು,ಸೆಪ್ಟಂಬರ್,8,2020(..): ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಪ್ಪ (55) ಸಾವನ್ನಪ್ಪಿದ ಕೈದಿ. ಅನಾರೋಗ್ಯದಿಂದ ಬಳಲುತ್ತಿದ್ದ ಖೈದಿ ಶಿವಪ್ಪ ಮೈಸೂರು ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಮುತ್ತತ್ತಿ ಹೋಬಳಿ ಲಾಳನಕೆರೆ ಗ್ರಾಮದ ನಿವಾಸಿಯಾದ ಶಿವಪ್ಪ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : – –