ಡ್ರಗ್ಸ್ ದಂಧೆ ಆರೋಪ ಪ್ರಕರಣ: ನಟಿ ಸಂಜನಾ ಬಂಧಿಸಿದ ಸಿಸಿಬಿ ಬೆಂಗಳೂರು, ಸೆಪ್ಟಂಬರ್,8,2020(..): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಬಂಧಿಸಿ ವಿಚಾರಣೆಗೊಳಪಡಿಸಿದ ಬೆನ್ನಲ್ಲೆ ಇದೀಗ ನಟಿ ಸಂಜನಾರನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಇಂದಿರಾ ನಗರದಲ್ಲಿರುವ ಸಂಜನಾ ಅವರ ನಿವಾಸದ ಮೇಲೆ ಚ್ಚು ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ಇಡೀ ಮನೆಯನ್ನು ಪರಿಶೀಲಿಸಿ ನಟಿ ಸಂಜನಾರನ್ನ ವಶಕ್ಕೆ ಪಡೆದಿದ್ದರು. ಡ್ರಗ್ಸ್ ಜಾಲದ ಆರೋಪದಡಿ ನಟಿ ಸಂಜನಾ ಆಪ್ತ ರಾಹುಲ್ ನನ್ನ ಈಗಾಗಲೇ ಬಂಧಿಸಲಾಗಿದೆ. ಇದೀಗ ನಟಿ ಸಂಜನಾರನ್ನ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. : - - – -