ಸಚಿವರ ಹೇಳಿಕೆಗಳಿಂದ ಸಿಸಿಬಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹೆಚ್ಚು : ವಿ.ಆರ್.ಸುದರ್ಶನ್ ಬೆಂಗಳೂರು,ಸೆಪ್ಟೆಂಬರ್,07,2020(..): ಡ್ರಗ್ಸ್ ಮಾಫಿಯ ಬಗ್ಗೆ ಸಚಿವರ ಹೇಳಿಕೆಗಳಿಂದ ತನಿಖಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಲಿದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿ.ಆರ್ ಸುದರ್ಶನ್, ತನಿಖಾಧಿಕಾರಿಗಳು ವರದಿ ನೀಡುವವರೆಗೆ ಸಚಿವರುಗಳು ಯಾವುದೇ ಹೇಳಿಕೆ ನೀಡಬಾರದು. ಸಚಿವರು ಹೇಳಿಕೆ ನೀಡಿದರೆ, ಇದರಿಂದ ತನಿಖಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗುವುದು. ವರದಿ ಬಂದ ಬಳಿಕ ತಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಲಲಿ ಎಂದು ಹೇಳಿದ್ದಾರೆ. ಡ್ರಗ್ಸ್ ದಂಧೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಸಮಾಜದ ಹಿತದೃಷ್ಟಿಯಿಂದ ಉನ್ನತ ಮಟ್ಟದ ತನಿಖೆಯಾಗಬೇಕು. ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ. : ----’--..