ಡ್ರಗ್ ದಂಧೆ ನಂಟು: ನಟಿ ರಿಯಾ ಚಕ್ರವರ್ತಿ ಬಂಧನ ಸಾಧ್ಯತೆ ಮುಂಬೈ, ಸೆಪ್ಟೆಂಬರ್, 07,2020(..):ನಟಿ ರಿಯಾ ಚಕ್ರವರ್ತಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ಕಚೇರಿಗೆ ಆಗಮಿಸಿದ್ದಾರೆ. ರಿಯಾ ಚಕ್ರವರ್ತಿ ಅವರನ್ನು ಎನ್ ಸಿ ಬಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾನುವಾರ ಆರು ಗಂಟೆಗಳ ಕಾಲ ಎನ್​​ಸಿಬಿ ಅಧಿಕಾರಿಗಳು ರಿಯಾರನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎನ್‌ಸಿಬಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಮುತಾ ಅಶೋಕ್ ಜೈನ್, ರಿಯಾರನ್ನು ಸೋಮವಾರ ಕೂಡ ಮತ್ತೆ ಕರೆಯಿಸಿಕೊಂಡು ಅವರ ಹೇಳಿಕೆಗಳನ್ನ ರೆಕಾರ್ಡ್​ ಮಾಡಲಾಗುವುದು ಎಂದು ತಿಳಿಸಿದ್ದರು.