ಸಂಸದರಿಗೆ ಪ್ರಧಾನಿ ಮೋದಿ ಎದುರು ನಿಲ್ಲುವ ಧೈರ್ಯವಿಲ್ಲ-ಈಶ್ವರ್ ಖಂಡ್ರೆ ಟೀಕೆ… ಬೀದರ್, ಸೆಪ್ಟೆಂಬರ್, 07,2020(..): ಕೊರೋನಾದಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಬರುತ್ತಿಲ್ಲ. ಆದರೆ, ಸಂಸದರುಗಳಿಗೆ ಪ್ರಧಾನಿ ಎದುರು ನಿಲ್ಲುವ ಧೈರ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದಾರೆ. ಬೇರೆ ದೇಶದಲ್ಲಿ ನೆರೆ ಹಾವಳಿ ಎದುರಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುತ್ತಾರೆ. ಆದರೆ, ನಮ್ಮ ದೇಶದ ರಾಜ್ಯಗಳಲ್ಲಿ ನೆರೆ ಹಾವಳಿಯಾದರೂ ಸೌಜನ್ಯಕ್ಕೂ ಅವರು ಟ್ವೀಟ್ ಮೂಲಕ ಸಾಂತ್ವನ ಹೇಳುವುದಿಲ್ಲ ಎಂದು ಕಿಡಿಕಾರಿದರು. ಕೊರೋನಾ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಕೇಂದ್ರ, ರಾಜ್ಯ ಸರಕಾರ ಘೋಷಿಸಿದ ಪರಿಹಾರ ಹಣವು ಎಷ್ಟು ಜನರಿಗೆ ತಲುಪಿದೆ. ಕೊರೊನಾದಿಂದಾ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. : ------- - -