ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಪರ ರಾಗಿಣಿ ಪ್ರಚಾರ ಮಾಡಿರುವ ಫೋಟೊಗಳಿವೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಬೆಂಗಳೂರು, ಸೆಪ್ಟೆಂಬರ್, 07,2020(..): ನಟಿ ರಾಗಿಣಿಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ, ಬೈ ಎಲೆಕ್ಷನ್ ನಲ್ಲಿ ಅವರು ಪ್ರಚಾರ ಮಾಡಿರುವ ಫೋಟೊಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ನಮ್ಮ ಸರಕಾರದ ಅಳ್ವಿಕೆಯ ಸಮಯಯದಲ್ಲಿಯೂ ಡ್ರಗ್ಸ್ ಹಾವಳಿ ಇತ್ತು. ತಡೆಯಲು ಪ್ರಯತ್ನಿಸಿದ್ದೆವು. ಆದರೆ, ಅದು ಇಂದು ಬೆಳಕಿಗೆ ಬಂದಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಯಾರೆ ಭಾಗಿಯಾಗಿದ್ದರು ಶಿಕ್ಷೆಯಾಗಲಿ ಎಂದು ಹೇಳಿದರು. : ----- --