ನಾಳೆ ದಸರಾ ಉನ್ನತ ಮಟ್ಟದ ಸಭೆ: ನಾಡಹಬ್ಬ ಮೈಸೂರು ದಸರಾ ಆಚರಣೆ ಬಗ್ಗೆ ಅಂತಿಮ ನಿರ್ಧಾರ… ಮೈಸೂರು, ಸೆಪ್ಟಂಬರ್,7,2020(..):ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು ಈ ನಡುವೆ ನಾಳೆ ನಾಡಹಬ್ಬ ಮೈಸೂರು ದಸರಾ ಆಚರಣೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದ್ದು ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಹಾಗೂ ಈ ಭಾಗದ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಬಾರಿ ಮೈಸೂರು ದಸರಾ ಆಚರಣೆಯಲ್ಲಿ ಜಂಬೂಸವಾರಿ ಮೆರವಣಿಗೆ ಇರಲಿದೆಯಾ? ಅಥವಾ ದಸರಾ ಅರಮನೆಗೆ ಸೀಮಿತವಾಗಲಿದೆಯಾ? ದಸರಾ ಉದ್ಘಾಟಕರು ಯಾರು? ಈ ಬಾರಿಯ ದಸರಾ ಬಜೆಟ್‍ ಎಷ್ಟು ? ಈ ಬಾರಿಯ ದಸರಾದಲ್ಲಿ ಎಷ್ಟು ಆನೆಗಳು ಇರಬೇಕು? ಈ ಎಲ್ಲಾ ವಿಚಾರಗಳ ಬಗ್ಗೆಯೂ ನಾಳೆ ನಡೆಯುವ ಹೈಪವರ್ ಕಮಿಟಿ ಮೀಟಿಂಗ್ ನಲ್ಲಿ ತೀರ್ಮಾನವಾಗಲಿದೆ. : - -- - –- - .