ನಟ ರಾಗಿಣಿ ಕಾರು ಡ್ರೈವರ್ ಸಿಸಿಬಿ ವಶಕ್ಕೆ…. ಬೆಂಗಳೂರು,ಸೆಪ್ಟಂಬರ್,7,2020(..): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಅವರನ್ನ ಬಂಧಿಸಿ ಸಿಸಿಬಿ ವಿಚಾರಣೆಗೊಳಪಡಿಸಿದ್ದು ಇದೀಗ ಅವರ ಕಾರ್ ಡ್ರೈವರ್ ನನ್ನು ಸಿಸಿಬಿ ವಶಕ್ಕೆ ಪಡೆದಿದೆ. ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ನಟಿ ರಾಗಿಣಿ ಕಾರು ಡ್ರೈವರ್ ಇಮ್ರಾನ್ ನನ್ನ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರು ಚಾಲಕ ಇಮ್ರಾನ್ ವಿರುದ್ದ ಡ್ರಗ್ಸ್ ತಂದು ಕೊಡುತ್ತಿದ್ದ ಆರೋಪ ಕೇಳಿ ಬಂದಿದ್ದು ಈಗಾಗಿ ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ನಟಿ ರಾಗಿಣಿ ಹಾಗೂ ಅವರ ಆಪ್ತ ರವಿ ಶಂಕರ್ ಮತ್ತು ನಟಿ ಸಂಜನಾ ಅವರ ಆಪ್ತ ರಾಹುಲ್ ರನ್ನ ಸಿಸಿಬಿ ಬಂಧಿಸಿ ವಿಚಾರಣೆಗೊಳಪಡಿಸಿದೆ. : -’ - - -