ಮೈಸೂರು ದಸರಾ ಆಚರಣೆ ಸಂಬಂಧ ಸೆ.8ಕ್ಕೆ ಹೈಪವರ್ ಕಮಿಟಿ ಮೀಟಿಂಗ್ – ಸಚಿವ ಎಸ್.ಟಿ ಸೋಮಶೇಖರ್ ಮೈಸೂರು,ಸೆಪ್ಟಂಬರ್,5,2020(..):ನಾಡ ಹಬ್ಬ ಮೈಸೂರು ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟಂಬರ್ 8 ರಂದು ಹೈಪವರ್ ಕಮಿಟಿ ಸಭೆ ನಡೆಯಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. ಮೈಸೂರು ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಸೆಪ್ಟಂಬರ್ 8 ರಂದು ನಡೆಯುವ ಹೈಪವರ್ ಕಮಿಟಿ ಸಭೆಯಲ್ಲಿ ದಸರಾ ಆಚರಣೆ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಬಳಿಕ ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ತಿಳಿಸಿದರು. ಸ್ಯಾಂಡಲ್‌ ವುಡ್ ಡ್ರಗ್ ಮಾಫಿಯಾ ಬೆಳಕಿಗೆ ಬಂದ ಬೆನ್ನಲ್ಲೇ ಮೈಸೂರಿನಲ್ಲೂ ಹೈ ಅಲರ್ಟ್ ಆಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಸ್.ಟಿ ಸೋಮಶೇಖರ್, ಈ ರೀತಿ ಪ್ರಕರಣ ಕಂಡು ಬಂದಲ್ಲಿ ಪೊಲೀಸರೇ ಜವಾಬ್ದಾರರು. ಆ ವ್ಯಾಪ್ತಿಯ ಎಸಿಪಿ ಇನ್ಸಪೆಕ್ಟರ್ ಅವರೇ ನೇರ ಹೊಣೆ. ಅವರ ವಿರುದ್ಧ ಕ್ರಮ‌ ಕೈಗೊಳ್ಳಲಾಗುವುದು. ಈ ಎಲ್ಲಾ ವಿಚಾರಗಳ ಚರ್ಚೆಗೆ ಸಭೆ ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದರು. : - – - --