ನಟಿ ನಿವೇದಿತಾ ವಿರುದ್ಧವೂ ದಾಖಲಾಯ್ತು ಎಫ್’ಐಆರ್ ಬೆಂಗಳೂರು, ಸೆಪ್ಟೆಂಬರ್ 09, 2020 (..): ನಟಿ ನಿವೇದಿತಾ ತುಳಸಿಗೆ ಗಾಂಜಾವನ್ನು ಹೋಲಿಕೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಈ ಸಂಬಂಧ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. “ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ” ಎಂದು ಹೇಳಿದ್ದರು. ಈ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಎ.ದೀಪಕ್ ಎಂಬುವರು ಮಲ್ಲೇಶ್ವರಂ ಪೊಲೀಸ್​ ಠಾಣೆಯಲ್ಲಿ‌ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ.ಸದ್ಯ ನಟಿ ನಿವೇದಿತಾಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಸಲು ಪೊಲೀಸರು ಮುಂದಾಗಿದ್ದಾರೆ.