‘ರಾಬರ್ಟ್’ ನಾಯಕಿ ಆಶಾ ಭಟ್ ಫಸ್ಟ್ ಲುಕ್ ಲಾಂಚ್ ಬೆಂಗಳೂರು, ಸೆಪ್ಟೆಂಬರ್ 05, 2020 (..): ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ನಾಯಕಿ ಆಶಾ ಭಟ್ ಅವರ ಫಸ್ಟ್ ಲುಕ್ ಇಂದು ಲಾಂಚ್ ಆಗಲಿದೆ. ಲಾಕ್ ಡೌನ್ ನಿಂದಾಗಿ ಚಿತ್ರ ಇನ್ನೂ ತೆರೆ ಕಂಡಿಲ್ಲ. ಹೀಗಾಗಿ ಚಿತ್ರತಂಡ ಆಗಾಗ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡುತ್ತಿದೆ. ರಾಬರ್ಟ್ ಸಿನಿಮಾದಲ್ಲಿ ನಾಯಕ ನಟಿ ಆಶಾ ಭಟ್ ಅವರ ಲುಕ್ ಹೇಗಿರಲಿದೆ ಎಂದು ಬಹಿರಂಗಪಡಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ದೇಶಕ ತರುಣ್ ಸುಧೀರ್ ಪ್ರಕಟಿಸಿದ್ದಾರೆ.