ಬೀದಿನಾಯಿಗಳಿಗೆ ಗೌರವ ಕೊಡುತ್ತೇನೆ, ಪ್ರಶಾಂತ್ ಸಂಬರಗಿ ಹಂದಿ ; ನಟಿ ಸಂಜನಾ ಕಿಡಿ ಬೆಂಗಳೂರು, ಸೆಪ್ಟೆಂಬರ್, 04, 2020(..); ಬೀದಿನಾಯಿಗಳಿಗೆ ಗೌರವ ಕೊಡುತ್ತೇನೆ. ಪ್ರಶಾಂತ್ ಸಂಬರಗಿ ಹಂದಿ. ಅವರಿಗೆ ನಾನು ಗೌರವ ಕೊಡುವುದಿಲ್ಲ. ಅವರು ಯಾರೆಂದು ನನಗೆ ಗೊತ್ತಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಕುರಿತು ಪ್ರಶಾಂತ್ ಸಂಬರಗಿ ನೀಡಿದ ಹೇಳಿಕೆಯನ್ನು ಖಂಡಿಸಿ, ಪ್ರಶಾಂತ್ ಸಂಬರಿಗೆ ಅವರಿಗೆ ನನ್ನ ಪ್ರಶ್ನೆ ಮಾಡುವ ಅಧಿಕಾರ ಹೇಗಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ. 16 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಆ ವ್ಯಕ್ತಿ ಹೆಸರು ನಾನು ಕೇಳಿಯೇ ಇಲ್ಲ. ನಾನು ಮಾಡಿರುವ ಐವತ್ತು ಸಿನಿಮಾ ಅವನಿಗೆ ಗೊತ್ತಿಲ್ಲ. ಅವನಿಗೆ ನನ್ನ ಹೆಸರು ತೆಗೆದುಕೊಳ್ಳುವ ಧೈರ್ಯವಿಲ್ಲ. ಕಣ್ಣು ಕಾಣದ ಹಂದಿಗೆ ನಾವು ಯಾಕೆ ಜ್ಞಾನ ಕೊಡಬೇಕು ಎಂದು ಕಿಡಿಕಾರಿದ್ದಾರೆ. ನಟರ ಬಳಿ ಇಪ್ಪತ್ತು ಕಾರುಗಳು ಇದ್ದರೂ ಪ್ರಶ್ನಿಸುವುದಿಲ್ಲ. ಆದರೆ, ನಟಿಯರ ಬಳಿ ಎರಡು ಕಾರುಗಳಿದ್ದರೂ ಪ್ರಶ್ನಿಸುತ್ತಾರೆ ಏಕೆ? ನನ್ನ ಮೇಲೆ ಕಣ್ಣು ದೃಷ್ಟಿಯಾಗಿರಬೇಕು. ಹಿರೋಯಿನ್ ಯಾಕೆ ಪ್ರಶನೆ ಮಾಡ್ತಿರ ಹೀರೋಗಳನ್ನ ಯಾಕೆ ಪ್ರಶನೆ ಮಾಡಲ್ಲ ನೀವು. ನಟಿಯರ ಬಳಿ ಎರಡು ಕಾರು ಇದ್ದರೆ ಪ್ರಶ್ನೆ ಮಾಡ್ತಾರೆ. ನನ್ನ ಮೇಲೆ ಕಣ್ಣು ದೃಷ್ಟಿಯಾಗಿರಬೇಕು. ಅದಕ್ಕೆ ಹೀಗೆಲ್ಲಾ ಆಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ. ; ------