ಸ್ಯಾಂಡಲ್ ವುಡ್ ನಟಿ ರಾಗಿಣಿ ಸಿಸಿಬಿ ಪೊಲೀಸರ ವಶಕ್ಕೆ… ಬೆಂಗಳೂರು, ಸೆಪ್ಟಂಬರ್,4,2020(..):ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ಗೆ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ರಾಗಿಣಿ ಅವರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ನಟಿ ರಾಗಿಣಿ ಅವರಿಗೆ ಶಾಕ್ ನೀಡಿದ್ದು, ಸರ್ಚ್ ವಾರೆಂಟ್ ನೊಂದಿಗೆ ತೆರಳಿರುವ ಸಿಸಿಬಿ ಪೊಲೀಸರು ಯಲಹಂಕದ ಜ್ಯುಡಿಷಿನಲ್ ಲೇಓಟ್ ನಲ್ಲಿರುವ ರಾಗಿಣಿ ಅವರ ಅಪಾರ್ಟ್’ಮೆಂಟ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ವೇಳೆ ನಟಿ ರಾಗಿಣಿ ಅವರ ಕಾರು ಕೀ, ಮೊಬೈಲ್ ಮನೆ ಕೀಗಳನ್ನು ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತು ಮಾರಾಟ ದಂಧೆ ಪ್ರಕರಣದಲ್ಲಿ ಖ್ಯಾತ ನಟಿ ರಾಗಿಣಿ ಆಪ್ತ ರವಿ ಶಂಕರ್ ನನ್ನು ಸಿಸಿಬಿ ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದರು. : –- - - – .