ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪೂರ್ವನಿಯೋಜಿತ -ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸದಸ್ಯ ಮದನ್ ಗೋಪಾಲ್ ಹೇಳಿಕೆ ಬೆಂಗಳೂರು, ಸೆಪ್ಟೆಂಬರ್, 04, 2020(..); ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಯು ಪೂರ್ವನಿಯೋಜಿತವಾಗಿದ್ದು, ಇದರಲ್ಲಿ ಸ್ಥಳೀಯರ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸದಸ್ಯ ಮದನ್ ಗೋಪಾಲ್ ತಿಳಿಸಿದ್ದಾರೆ. ಈ ಗಲಭೆಯು ರಾಜಕೀಯ ದುರುದ್ದೇಶದಿಂದ ನಡೆದಿರುವುದಲ್ಲ. ವ್ಯವಸ್ಥೆಯ ವಿರುದ್ಧ, ನಿಗಧಿತ ಸಮುದಾಯದ ವಿರುದ್ಧ ನಡೆಸಲಾಗಿದೆ. ಇದರಲ್ಲಿ ಎಸ್ ಡಿ ಐ, ಪಿಎಫ್ ಐ ಈ ಎರಡು ಸಂಘಟನೆಗಳು ಭಾಗಿಯಾಗಿದ್ದು, ಉತ್ತರ ಪ್ರದೇಶ ಮಾದರಿಯ ಘಟನೆಯಾಗಿದೆ. ಕನೆಕ್ಟ್ ದ ರಾಷ್ಟ್ರೀಯ ಮೌಲ್ಯಗಳ ವಿರುದ್ಧ ಜನರನ್ನು ಸಂಘಟಿಸಲಾಗುತ್ತಿದೆ. ಹೀಗಾಗಿ, ಇನ್ನುಮುಂದೆಯಾದರೂ, ಇಂಟೆಲಿಜೆನ್ಸ್ ಅನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ತಿಳಿಸಿದ್ದಾರೆ. ; - ----