ರಾಜಾಹುಲಿ ಅಂತಾ ಬಿರುದು ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ ಕೆಲಸ ಮಾಡಲಿ- ಸಿಎಂ ಬಿಎಸ್ ವೈಗೆ ಟಾಂಗ್ ಕೊಟ್ಟ ದಿನೇಶ್ ಗುಂಡೂರಾವ್…. ಬೆಂಗಳೂರು,ಸೆಪ್ಟಂಬರ್ ,3,2020(..):ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿದೆ. ರಾಜ್ಯ ಬಿಜೆಪಿ ಸರ್ಕಾರ ಈಗ ಸಾಲಸೋಲ ಮಾಡಿದೆ. ಹೀಗಾಗಿ ರಾಜಾಹುಲಿ ಅಂತಾ ಬಿರುದು ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟಾಂಗ್ ನೀಡಿದರು. ಮಾಧ್ಯಮದ ಜತೆ ಇಂದು ಮಾತನಾಡಿದ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಎಲ್ಲಾ ವಿಚಾರದಲ್ಲೂ ರಾಜಾಹುಲಿಯಾಗಿರಬೇಕು. ಬರೀ ರಾಜಾ ಇಲಿಯಾದರೇ ಪ್ರಯೋಜವಿಲ್ಲ. ಈಗಾಗಲೇ ಸರ್ಕಾರ ಸಾಲಸೋಲ ಮಾಡಿದೆ. ಈ ನಡುವೆ ಕೇಂದ್ರದ ಮುಂದು ಮಾತನಾಡುವ ಧೈರ್ಯವಿಲ್ಲ. ಹೀಗೆ ಏನು ಮಾಡದೆ ಕೈಕಟ್ಟಿ ಕುಳಿತರೇ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಲಿದೆ. ಹೀಗಾಗಿ ರಾಜಾಹುಲಿ ಹೆಸರಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದರು. ಡ್ರಗ್ಸ್ ದಂಧೆಯಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಬೇಕು. ಅವರ ಮಕ್ಕಳು ಇವರ ಮಕ್ಕಳು , ನಟ ನಟಿಯರು ಅಂತಿಲ್ಲ. ಪ್ರಚಾರದ ಹೊರತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಡೀ ದೇಶದಲ್ಲಿ ಡ್ರಗ್ಸ್ ದಂಧೆ ಹಬ್ಬಿದೆ. ಯಾರು ಸಪ್ಲೈ ಮಾಡುತ್ತಾರೆ ವಿತರಣೆ ಮಾಡುತ್ತಾರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು. : - - - - -