ಕೊರೋನಾ ಸಾವಿನ ಅಂಕಿ ಸಂಖ್ಯೆ ಬಗ್ಗೆ ಸುಳ್ಳು ಮಾಹಿತಿ ಆರೋಪ: ಸಚಿವ ಸುಧಾಕರ್ ವಿರುದ್ದ ಹೆಚ್.ಕೆ ಪಾಟೀಲ್ ಕಿಡಿ… ಬೆಂಗಳೂರು,ಸೆಪ್ಟಂಬರ್,3,2020(..): ವೈದ್ಯಕೀಯ ಶಿಕ್ಷಣ ಸಚಿವರೇ ಸಾವಿನ ಅಂಕಿ-ಸಂಖ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡಿ ಸಮರ್ಥನೆಗಳನ್ನು ಮಾಡಿಕೊಳ್ಳುವ ನಿಮ್ಮ ಪ್ರಯತ್ನ. ಸಂಕಷ್ಟದ ಈ ಕಾಲದಲ್ಲಿ ಆಘಾತಕಾರಿ ಎಂದು ಸಚಿವ ಡಾ.ಕೆ ಸುಧಾಕರ್ ವಿರುದ್ದ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಕೆ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವರೇ ಸಾವಿನ ಅಂಕಿ-ಸಂಖ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಭಾರತದಲ್ಲಿ ಸಾವಿನ ಸಂಖ್ಯೆ ದಶಲಕ್ಷಕ್ಕೆ 42. ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ಇದೆ. ನೆನಪಿರಲಿ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಜನೇವರಿಯಿಂದ ಜುಲೈವರೆಗೆ ಶೇ. 32ರಷ್ಟು ಹೆಚ್ಚಳ ಕಂಡಿದೆ. ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡಿ ಸಮರ್ಥನೆಗಳನ್ನು ಮಾಡಿಕೊಳ್ಳುವ ನಿಮ್ಮ ಪ್ರಯತ್ನ. ಸಂಕಷ್ಟದ ಈ ಕಾಲದಲ್ಲಿ ಆಘಾತಕಾರಿ. ಸತ್ಯವಾದ ಮಾಹಿತಿ ಜನರ ಜೊತೆಗೆ ಹಂಚಿಕೊಳ್ಳಿ, ಕೊರತೆಗಳನ್ನು ನೀಗಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಲು ಆಡಳಿತ ಯಂತ್ರ ಚುರುಕುಗೊಳಿಸಿ ಎಂದು ಸಲಹೆ ನೀಡಿದ್ದಾರೆ. : - – - – – – -