‘ಕಳ್ಳನ ಮನಸ್ಸು ಹುಳ್ ಹುಳ್ಗೆ’ ಅನ್ನೋ ಆಗಾಯ್ತು: ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ… ಚನ್ನಪಟ್ಟಣ,ಸೆಪ್ಟಂಬರ್ 2,2020(..): ಡ್ರಗ್ಸ್ ದಂಧೆಕೋರರಿಂದಲೇ ಮೈತ್ರಿ ಸರ್ಕಾರ ಪತನವಾಯ್ತು ಎಂದು ನೀಡಿದ್ದ ಹೇಳಿಕೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಿಜೆಪಿಯವರ ಮನಸ್ಸು ‘ಕಳ್ಳನ ಮನಸ್ಸು ಹುಳ್ ಹುಳ್ಗೆ ಅವರ್ಯಾಕೆ ಬೆನ್ನು ಕೆರೆದುಕೊಳ್ಳುತ್ತಿದ್ದಾರೆ’ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕರಿಗೆ ಹೆಚ್.ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಡ್ರಗ್ಸ್ ಮಾಫಿಯಾ ವಿಚಾರ ಕುರಿತು ಚನ್ನಪಟ್ಟಣದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನು ತುರುವೆಕೆರೆಯಲ್ಲಿ ಹೇಳಿದ್ದರ ಬಗ್ಗೆ ಬಿಜೆಪಿ ನಾಯಕರು ಅರ್ಧ ಮಾಡಿಕೊಳ್ಳಬೇಕು. ಕ್ರಿಕೆಟ್, ಕಾನೂನು ಬಾಹಿರ ಡ್ಯಾನ್ಸ್ ಬಾರ್ ನಡೆಸುತ್ತಿರುವವರು ಹಣ ಸಂಗ್ರಹಿಸಿ ನನ್ನ ಸರ್ಕಾರ ಪತನಗೊಳಿಸಲು ಹೊರಟಿತ್ತು. ಸರ್ಕಾರ ಪತನ ಆಗಿದ್ದರ ಬಗ್ಗೆ ನಾನು ಮಾತನಾಡಿದ್ದೇನೆ. ನಾನು ಮಾತನಾಡುವ ಪ್ರತಿ ಪದದಲ್ಲೂ ಗೊಂದಲವಿರುವುದಿಲ್ಲ. ನಾನು ನೇರವಾಗಿ ಮಾತನಾಡುವ ವ್ಯಕ್ತಿ. ಬಿಜೆಪಿಯವರ ಮನಸ್ಸು ಕಳ್ಳನ ಮನಸ್ಸು ಹುಳ್ ಹುಳ್ಗೆ ಅವರ್ಯಾಕೆ ಬೆನ್ನು ಕೆರೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ನನಗೆ ಯಾವುತ್ತು ಮತ್ತು ಬರಿಸೋದಿಕ್ಕೆ ಬರೋದಿಲ್ಲ. ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ಮತ್ತು ಬರೋದಿಲ್ಲ. ಕೆಲವರಿಗೆ ಅಧಿಕಾರ ಬಂದಾಗ ಮತ್ತು ಬರುತ್ತದೆ. ಅದು ನನಗೆ ಬಂದಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಯಾವುದೇ ಗಲಾಟೆಯಾದ ಆರಂಭದ ಸಂಧರ್ಭದಲ್ಲಿ ಇರುವ ಬಿಸಿ ಆರು ತಿಂಗಳ ಬಳಿಕ ಅದೇ ರೀತಿ ಇರುವುದಿಲ್ಲ. ಮಂಗಳೂರಿನಲ್ಲಿ ನಡೆದ ಘಟನೆಗಳೇ ಉದಾಹರಣೆ. ಮಂಗಳೂರಿನ ತನಿಖೆ ಯಾವ ಹಂತದಲ್ಲಿ ಇದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು. : - --- -