ಮಾದಕ ವಸ್ತು ಮಾರಾಟ: ಬೆಂಗಳೂರಲ್ಲಿ ಮತ್ತೆ ಮೂವರು ಪೊಲೀಸ ಬಲೆಗೆ ಬೆಂಗಳೂರು, ಸೆಪ್ಟೆಂಬರ್ 01, 2020 (..):ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮತ್ತೆ ಮೂವರನ್ನು ಬಂಧಿಸಲಾಗಿದೆ. ಮಹಮ್ಮದ್ ಅಲಗೀರ್, ಮಹಮ್ಮದ್ ರಿಪೂನ್ ಹಾಗೂ ಮೊಹರ್ ಅಲಿ ಬಂಧಿತರು. ಈ ಮೂವರು ಪಶ್ಚಿಮ ಬಂಗಾಳ ಮೂಲದವರು. ಬೇಗೂರು ಪೋಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 4.40 ಲಕ್ಷ ನಗದು, 11 ಕೆಜಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಪಶ್ಚಿಮ ಬಂಗಾಳದಿಂದ ಮಾದಕವಸ್ತುಗಳನ್ನು ಬೆಂಗಳೂರಿಗೆ ತಂದು ಮಾರಾಟ ನಡೆಸಿದ್ದರು.