ಗೋಮಾಂಸ ರಪ್ತು ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ : ಡಾ.ಸುಧಾಕರ್ ಹೇಳಿಕೆ ಬೆಂಗಳೂರು, ಆಗಸ್ಟ್, 30, 2020(..): ಗೋವುಗಳು ರೈತನ ಬೆನ್ನೆಲುಬು. ಗೋವುಗಳನ್ನು ಹತ್ಯೆ ಮಾಡುವುದು ಸರಿಯಲ್ಲ. ದೇಶದಲ್ಲಿ ಗೋಮಾಂಸ ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಡ್ರಗ್ಸ್ ಮಾಫಿಯ ಅತ್ಯಂತ ಭಯನಾಕವಾಗಿದ್ದು, ಈಗಲೇ ಡ್ರಗ್ಸ್ ದಂಧೆ ಮಟ್ಟಹಾಕಬೇಕು. ಇಲ್ಲವಾದಲ್ಲಿ ಇದೊಂದು ಅಪಾಯಕಾರಿ. ಇದು ಸಮಾಜಕ್ಕೆ ಮಾರಕವಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಶುರುವಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ಹೆಚ್ಚು ಜನ ಗುಣಮುಖರಾಗುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. : -----.