ಬೆಂಗಳೂರು,ಸೊಲ್ಲಾಪುರ ಚೊಚ್ಚಲ ರೋರೋ ರೈಲಿಗೆ ಸಿಎಂ ಚಾಲನೆ ಬೆಂಗಳೂರು, ಆಗಸ್ಟ್, 30, 2020(..): ಬೆಂಗಳೂರು ಮತ್ತು ಸೊಲ್ಲಾಪುರಕ್ಕೆ ನಡುವಿನ ಚೊಚ್ಚಲ ರೋರೋ ರೈಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು. ಗೃಹ ಕಚೇರಿ ಕೃಷ್ಣದಿಂದ ವಿಡಿಯೋ ಕಾನ್ಫರೆನ್ಸ ಮೂಲಕ ಭಾನುವಾರ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ರೋರೋ ರೈಲು ಸರಕು ತುಂಬಿದ ಟ್ರಕ್ ಅಥವಾ ಲಾರಿಗಳ ಸಾಗಣೆಯ ಸೇವೆಗೆ ಈ ರೈಲು ಬಳಕೆಯಾಗಲಿದೆ. ರೋರೊ ರೈಲು 42 ಲಾರಿಗಳನ್ನು ಹೊತ್ತೊಯ್ಯಲಿದ್ದು, ಬೆಂಗಳೂರು ಮತ್ತು ಸೊಲ್ಲಾಪುರದ ನಡುವಿನ ಚೊಚ್ಚಲ ರೋರೊ ರೈಲು ಇದಾಗಿದೆ. : -----