ಡ್ರಗ್ಸ್ ಮಾಫಿಯಾ: ಗಂಭೀರವಾಗಿ ಪರಿಗಣಿಸಿ- ಸರ್ಕಾರಕ್ಕೆ ಡಾ.ಜಿ.ಪರಮೇಶ್ವರ್ ಸಲಹೆ ತುಮಕೂರು, ಆಗಸ್ಟ್,29,2020(..); ಡ್ರಗ್ಸ್ ಮಾಫಿಯಾ ಹೊಸದೇನಲ್ಲ ಸಿಎಂ, ಗೃಹಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುವುದಾಗಿ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಇಂದು ತುಮಕೂರಿನಲ್ಲಿ ಮಾತನಾಡಿದ ಮಾಜಿ ಡಿಸಿಎಂ ಜಿ.ಪರಮೇಶ್ವರ್, ನಾನು ಗೃಹ ಸಚಿವನಾಗಿದ್ದಗಲೂ ಬೆಂಗಳೂರು ನಗರದಲ್ಲಿ ಡ್ರಗ್ಸ್ ಮಾಫಿಯಾ ಕಂಡು ಬಂದಿತ್ತು. ಅಪಾರ ಪ್ರಮಾಣದ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿತ್ತು. ಹಾಗಾಗಿ, ಇದು ಹೊಸದೇಲ್ಲ. ಸಿಎಂ ಹಾಗೂ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೆಕು ಎಂದು ತಿಳಿಸಿದ್ದಾರೆ. : -------.