ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ಲಿಂಕ್: ತಪ್ಪುಮಾಡಿದವರ ಬೆತ್ತಲೆ ಮಾಡಿ ಎಂದು ನಟ ಜಗ್ಗೇಶ್ ಟ್ವೀಟ್… ಬೆಂಗಳೂರು,ಆಗಸ್ಟ್,29,2020(..): ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರು ಸಿಲುಕಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಹಿರಿಯ ನಟ ಜಗ್ಗೇಶ್, ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ ಅರಿವಾಗಲಿ” ಎಂದು ತಿಳಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಆರೋಪ ಕುರಿತು ಸರಣಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಟ ಜಗ್ಗೇಶ್, “ಸರಿಯಾಗಿ ಬಾಳಿಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ! ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲಬದುಕಿ ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ! ಏಕ್ ಮಾರ್ ದೋ ತಕಡ ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ ಅರಿವಾಗಲಿ ಎಂದು ಹೇಳಿದ್ದಾರೆ. ಹಾಗೆಯೇ ಮತ್ತೊಂದು ಟ್ವೀಟ್ಟರ್ ನಲ್ಲಿ, ಶ್ರೇಷ್ಠ ಮನುಜನ್ಮ!ಅದುನಶ್ವರ ಸತ್ಯ!ಆದರು ಆ ನಶ್ವರದೇಹ ನಶಿಸುವಮುನ್ನ ಸಾರ್ಥಕಪಡಿಸಿ ಬದುಕಬೇಕು! ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ! ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು!ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೆ ನಶೆಹಾದರದ ದಾಸರು!ಉಪ್ಪುತಿಂದವ ನೀರು ಕುಡಿಯುವ..! ಎಂದು ನಟ ಜಗ್ಗೇಶ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾದಕ ವಸ್ತುಗಳ ಬಳಕೆಯಾಗುತ್ತಿದೆ ಎಂದು ಮಾಧ್ಯಮಗಳ ಎದುರು ಇಂದ್ರಜಿತ್ ಲಂಕೇಶ್ ಅವರು ನಿನ್ನೆ ಹೇಳಿಕೆ ನೀಡಿದ್ದರು. : – - - –