ಮನೆ ಬಾಗಿಲಿಗೆ ಸರ್ಕಾರ: ತಮ್ಮ ಕ್ಷೇತ್ರದ ಜನರ ಸಮಸ್ಯೆ ಆಲಿಸಲಿರುವ ಸಚಿವ ನಾರಾಯಣಗೌಡ… ಮಂಡ್ಯ,ಆಗಸ್ಟ್,28,2020(..):ಪುರಾಡಳಿತ, ತೋಟಗಾರಿಕೆ ಹಾಗು ರೇಷ್ಮೆ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣ ಗೌಡ ಅವರು ಇದೇ ಶನಿವಾರದಿಂದ ತಮ್ಮ ಕ್ಷೇತ್ರ ಕೆ‌.ಆರ್. ಪೇಟೆಯ ಜನರ ಮನೆ ಬಾಗಿಲಿಗೆ ಬಂದು ರೈತರ ಹಾಗು ತಾಲೂಕಿನ ಪ್ರಜೆಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಥಳದಲ್ಲೇ ಪರಿಹಾರ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ‌‌. ಕಾರ್ಯಕ್ರಮದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಹಾಜರು ಇದ್ದು ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲೀದ್ದಾರೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ತವರೂರಾದ ಬೂಕನಕೆರೆ ಹೋಬಳಿಯಿಂದ ಆರಂಭಿಸಲಿದ್ದಾರೆ‌. ಮುಂದೆ ಕ್ಷೇತ್ರದ ಎಲ್ಲ ಹೋಬಳಿಯಲ್ಲೂ ಈ ಕಾರ್ಯಕ್ರಮ ಮಾಡಲು ಸಚಿವರು ನಿರ್ಧರಿಸಿದ್ದಾರೆ‌. : - - – – – – .