ಮಹಿಳಾ ಶೌಚಾಲಯವಾಗಿ ನಿರ್ಮಾಣಗೊಂಡ ಕೆಎಸ್ ಆರ್ ಟಿಸಿ ಬಸ್: ಡಿಸಿಎಂ ಲಕ್ಷ್ಮಣ್ ಸವದಿ ಅವರಿಂದ ಉದ್ಘಾಟನೆ… ಬೆಂಗಳೂರು,ಆಗಸ್ಟ್,27,2020(..):ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿಯ ಅನುಪಯುಕ್ತ ಬಸ್ಸೊಂದನ್ನು ಆಕರ್ಷಕವಾಗಿ ” ಮಹಿಳಾ ಶೌಚಾಲಯ” ವನ್ನಾಗಿ ನಿರ್ಮಿಸಲಾಗಿದೆ. ಈ ನೂತನ ಸ್ತ್ರೀ ಶೌಚಾಲಯವನ್ನ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಉದ್ಘಾಟಿಸಿದರು. ಈ ವೇಳೆ ಕೆ ಎಸ್ ಆರ್ ಟಿ‌ ಸಿ‌ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ವ್ಯವಸ್ಥಾಪಕ ನಿರ್ದೇಶಕರಾದ ಹರಿ‌ ಮರಾರ್, ಅಧಿಕಾರಿಗಳಾದ ಡಾ.ರಾಮ್‌ನಿವಾಸ್ ಸಪೆಟ್ , ಕೆ ವೆಂಕಟೇಶ್ ಉಪಸ್ಥಿತರಿದ್ದರು. ಸ್ತ್ರೀ ಶೌಚಾಲಯ ಉದ್ಱಾಟಿಸಿದ ಬಳಿಕ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಕೆ‌ಎಸ್ ಆರ್‌ ಟಿಸಿ‌ಯ ಒಂದು ಅನುಪಯುಕ್ತ ಬಸ್ಸನ್ನು ( ) ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಲಾಗಿದೆ. ಇದನ್ನು ” ಸ್ತ್ರೀ ‌ಶೌಚಾಲಯ” ಎಂದು ಹೆಸರಿಸಲಾಗಿದೆ. ಸ್ವಚ್ಛತೆ ಯತ್ತ ಮತ್ತೊಂದು‌ ಹೆಜ್ಜೆಯನ್ನು ‌ಇಟ್ಟಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ‌ ಪ್ರಾಧಿಕಾರ , ಬೆಂಗಳೂರು ಶೌಚಾಲಯದ ವೆಚ್ಚವನ್ನು ಸಾಮಾಜಿಕ ಕಳಕಳಿ ( ) ಯೋಜನೆಯಡಿ ನೀಡಿದ್ದಾರೆ ಎಂದರು. ಹಾಗೆಯೇ ಈ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪಕಿನ್ , ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಮತ್ತು ಶೌಚಾಲಯಗಳು, ವಾಷ್ ಬೇಸಿನ್ ಗಳು, ‌ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಶೌಚಾಲಯದ‌ ಸಂಪೂರ್ಣ ವೆಚ್ಚ ರೂ.12 ಲಕ್ಷಗಳಾಗಿದೆ ಎಂದು ಮಾಹಿತಿ ನೀಡಿದರು. ಮಹಿಳಾ ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ‌ ಬಸ್ಸಿನಲ್ಲಿ ‌ನಿರ್ಮಿಸಲಾಗಿದೆ. ನಿಗಮವು ಹಲವು ಮಹಿಳಾ ಸ್ನೇಹಿ‌ ಉಪಕ್ರಮಗಳನ್ನು ಜಾರಿಗೆ ತಂದಿದ್ದು, ಬಸ್ ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿನ ನಮ್ಮ‌ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸಂತಸ ವ್ಯಕ್ತಪಡಿಸಿದರು. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿಗಮದ ಪ್ರಥಮ ಆದ್ಯತೆಯಾಗಿದ್ದು, ಕೊವಿಡ್ – 19 ಸಂದರ್ಭದಲ್ಲಿ ‌, ‌ ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯದ‌ ಪ್ರಾರಂಭ ಮಾದರಿಯಾಗಲಿದೆ. ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿಯ ಪ್ರಯತ್ನ ಶ್ಲಾಘನೀಯ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದರು. ಇದೇ ರೀತಿಯಲ್ಲಿ ಅನುಪಯುಕ್ತ ಬಸ್ಸುಗಳನ್ನು ವಿವಿಧ ಯೋಜನೆಗಳಿಗೆ ಉಪಯೋಗಿಸಲಿ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸಲಹೆ ನೀಡಿದರು. : - – ’- - – - .