ಐಪಿಎಲ್​ ಸಮರಕ್ಕೆ ಆರ್’ಸಿಬಿ ರೆಡಿ: ಹೊಸ ಜೆರ್ಸಿ ರಿಲೀಸ್ ಬೆಂಗಳೂರು, ಆಗಸ್ಟ್ 26, 2020 (..):ಬೆಂಗಳೂರು ತಂಡದ ನೂತನ ಜೆರ್ಸಿ ಅನಾವರಣ ಮಾಡಲಾಗಿದೆ. ಆರ್​​ಸಿಬಿ ತನ್ನ ಟ್ವಿಟ್ಟರ್​ನಲ್ಲಿ ಫೋಟೋ ಪ್ರಕಟಿಸಿದೆ. ಐಪಿಎಲ್​ ಸಮರಕ್ಕೆ ಸಿದ್ಧ ಎನ್ನುವ ಸಂದೇಶವನ್ನು ಆರ್​ಸಿಬಿ ಟ್ವಿಟ್ಟರ್​ನಲ್ಲಿ ಸಾರಿದೆ. ಖ್ಯಾತ ಕ್ರೀಡಾ ಪರಿಕರಗಳ ಸಂಸ್ಥೆ ‘ಝೆವೆನ್’​ ನೂತನ ಜೆರ್ಸಿಯನ್ನು ವಿನ್ಯಾಸಗೊಳಿಸಿದೆ. ಕಳೆದ 5 ವರ್ಷಗಳಿಂದ ಈ ಸಂಸ್ಥೆಯು ಆರ್​​​​ಸಿಬಿ ಜತೆಗೆ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕಳೆದ ಸಲಕ್ಕೆ ಹೋಲಿಸಿದರೆ ಜೆರ್ಸಿಯಲ್ಲಿ ಈ ಸಲ ಸಣ್ಣ ಪುಟ್ಟ ಬದಲಾವಣೆಗಳಿವೆ. ಕೆಂಪು ಮತ್ತು ಕಪ್ಪು ಬಣ್ಣಗಳಿಂದ ವಿಶೇಷವಾಗಿ ಜೆರ್ಸಿ ವಿನ್ಯಾಸ ಮಾಡಲಾಗಿದೆ.