ಹೊಸಬರಿಗೆ ಕಾಸ್ಟಿಂಗ್ ಕೌಚ್ ‘ಅನಿವಾರ್ಯ’ ಎಂದ ಅನುಷ್ಕಾ ಶೆಟ್ಟಿ! ಬೆಂಗಳೂರು, ಆಗಸ್ಟ್ 26, 2020 (..):ಅನುಷ್ಕಾ ಶೆಟ್ಟಿ ಕೂಡ ಟಾಲಿವುಡ್‌ನಲ್ಲಿ ಸಹ ಕಾಸ್ಟಿಂಗ್ ಕೌಚ್ ಇದೆ ಎಂದು ಹೇಳಿದ್ದಾರೆ. ಜತೆಗೆ ಇದರಿಂದ ತಪ್ಪಿಸಿಕೊಂಡಿದ್ದಾದರೂ ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ. ನಾನು ಬಲಶಾಲಿಯಾಗಿರುವುದರಿಂದ ನಾನು ಕಾಸ್ಟಿಂಗ್ ಕೌಚ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಆದ್ದರಿಂದ ಈ ಮನರಂಜನಾ ಉದ್ಯಮದಲ್ಲಿ ಯಾರೂ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ. ಚಿತ್ರರಂಗಕ್ಕೆ ಹೊಸಬರಾದವರಿಗೆ ಕಾಸ್ಟಿಂಗ್ ಕೌಚ್ ಸಮಸ್ಯೆಗಳು ಅನಿವಾರ್ಯ. ಇದನ್ನೇ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ, ತನ್ನ ನೇರವಾದ ಮನೋಭಾವದಿಂದಾಗಿ ತಾನು ಎಂದಿಗೂ ಅಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿಲ್ಲ ಎಂದಿದ್ದಾರೆ.