ಶೀತಲ್ ಶೆಟ್ಟಿ ನಿರ್ದೇಶನದ ಶಾರ್ಟ್ ಮೂವಿ ಈ ವಾರಾಂತ್ಯದಲ್ಲಿ ರಿಲೀಸ್ ಬೆಂಗಳೂರು, ಆಗಸ್ಟ್ 26, 2020 (..):ನ್ಯೂಸ್ ಆ್ಯಂಕರ್ ಆಗಿದ್ದ ಶೀತಲ್ ಶೆಟ್ಟಿ ಬಿಗ್ ಬಾಸ್ ಬಳಿಕ ನಟಿಯಾಗಿ ಬಡ್ತಿ ಪಡೆದರು. ಇದೀಗ ನಿರ್ದೇಶಕಿಯಾಗಿಯೂ ಕೆಲಸ ಶುರು ಆರಂಭಿಸಿದ್ದಾರೆ. ಈ ನಡುವೆ ಅವರ ನಿರ್ದೇಶನದ ಮತ್ತೊಂದು ಶಾರ್ಟ್ ಫಿಲ್ಮ್ ರೆಡಿಯಾಗಿದ್ದು, ಅವರದ್ದೇ ಆದ ಯೂಟ್ಯೂಬ್ ಚಾನೆಲ್ ನಲ್ಲಿ ಇದೇ ಶನಿವಾರ ಈ ಶಾರ್ಟ್ ಫಿಲ್ಮ್ ಬಿಡುಗಡೆಯಾಗಲಿದೆ. ಈ ಕುರಿತು ಶೀತಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. “ಮತ್ತೊಂದು ನಾನೇ ಬರೆದ ಪುಟ್ಟದೊಂದು ಕಥೆಗೆ ಧ್ವನಿಯಾಗಿದ್ದೀನಿ.ನನ್ನ ಚಾನೆಲ್ ನಲ್ಲಿ. ಇದೆ ಶನಿವಾರ. . ://./kdJI8eWMPA ../KtYRD675LW ಎಂದು ಶೀತಲ್ ಟ್ವೀಟ್ ಮಾಡಿದ್ದಾರೆ.