ಕಾರ್ಯನಿರತ ಪತ್ರಕರ್ತರಿಗೆ ‘ಮಾಧ್ಯಮ ಆರೋಗ್ಯ ಕಾರ್ಡ್’ ವಿತರಣೆ… ಬೆಂಗಳೂರು,ಆ,26,2020(..):ರಾಜ್ಯದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮಣಿಪಾಲ್ ಆಸ್ಪತ್ರೆ ಮಾಧ್ಯಮ ಆರೋಗ್ಯ ಕಾರ್ಡ್ ನೀಡಲು ಮುಂದಾಗಿದೆ. ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಣಿಪಾಲ್ ಹಾಸ್ಪಿಟಲ್ ಸಂಸ್ಥೆಯ ಛೇರ್ಮನ್ ಡಾ.ಸುದರ್ಶನ್ ಬಲ್ಲಾಳ್ ಅವರು ಸಾಂಕೇತಿಕವಾಗಿ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಮಾಧ್ಯಮ ಆರೋಗ್ಯ ಕಾರ್ಡ್ ಹಸ್ತಾಂತರಿಸಿದರು. ಕಾರ್ಯ ನಿರತ ಪತ್ರಕರ್ತರಿಗಾಗಿ ಚಿಕಿತ್ಸಾ ಸೌಲಭ್ಯದಲ್ಲಿ ಶೇ.20 ರಷ್ಟು ರಿಯಾಯಿತಿ ನೀಡಲು ಮಣಿಪಾಲ್ ಆಸ್ಪತ್ರೆ ಒಪ್ಪಿಗೆ ಸೂಚಿಸಿದ್ದು ಇದಕ್ಕಾಗಿ ಮಾಧ್ಯಮ ಆರೋಗ್ಯ ಕಾರ್ಡ್ ನೀಡಲು ಮುಂದಾಗಿದೆ. ಜಿಲ್ಲಾ ಮಟ್ಟದಲ್ಲಿಯೂ ಈ ಕಾರ್ಡ್ ವಿತರಣಾ ಕಾರ್ಯಕ್ರಮ ಹಂತ ಹಂತವಾಗಿ ನಡೆಯಲಿದೆ ಎಂದು ಶಿವಾನಂದ ತಗಡೂರು ತಿಳಿಸಿದ್ದಾರೆ. : – - - -