ಸುಶಾಂತ್ ಸಾವಿನ ಪ್ರಕರಣ: ನಟಿ ರಿಯಾಗೆ ಡ್ರಗ್ಸ್ ಮಾಫಿಯಾ ನಂಟು ! ಬೆಂಗಳೂರು, ಆಗಸ್ಟ್ 26, 2020 (..):ನಟಿ ರಿಯಾ ವಾಟ್ಸಾಪ್ ಡ್ರಗ್ಸ್ ಮಾಫಿಯಾ ಬಗ್ಗೆ ಸುಳಿವು ನೀಡುತ್ತಿದೆ ಎನ್ನಲಾಗಿದೆ. ಡಿಲಿಟ್ ಆಗಿದ್ದ ವಾಟ್ಸಾಪ್ ಚಾಟನ್ನು ಹಿಂಪಡೆಯಲಾಗಿದೆ. ಇದ್ರಲ್ಲಿ ರಿಯಾ ಹಾಗೂ ಗೌರವ್ ಆರ್ಯ ಮಧ್ಯೆ ನಡೆದ ಮಾತುಕತೆ ಬಹಿರಂಗವಾಗಿದೆ. ಗೌರವ್ ಡ್ರಗ್ಸ್ ವ್ಯಾಪಾರಿಯಾಗಿದ್ದು, ಜಾರಿ ನಿರ್ದೇಶನಾಲಯ ರಿಯಾ ಹಾಗೂ ಗೌರವ್ ಆರ್ಯ ಡ್ರಗ್ಸ್ ಸಂಭಾಷಣೆಯ ವಿವರಗಳನ್ನು ಬಹಿರಂಗಪಡಿಸಿದೆ. ಈಗ ರಿಯಾ ಫೋನ್ ಪರಿಶೀಲನೆಗೆ ಸಿಬಿಐ, ಇಡಿ ಜೊತೆ ಕೈಜೋಡಿಸುವ ಸಾಧ್ಯತೆಯಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ.