: ಕೆ-ಸೆಟ್ ಪರೀಕ್ಷೆಗೆ ದಿನಾಂಕ ಫಿಕ್ಸ್ ಮೈಸೂರು, ಆ.25,2020 ( .. ):ಉಪನ್ಯಾಸಕರ ಹುದ್ದೆ ಆಯ್ಕೆ ಸಂಬಂಧ ನಡೆಸುವ ” ಕೆ- ಸೆಟ್ ” ಪರೀಕ್ಷೆಗೆ ಕಡೆಗೂ ದಿನಾಂಕ ನಿಗಧಿ‌. ಸೆ.20 ರಂದು ಪರೀಕ್ಷೆ ನಡೆಸಲು ರಾಜ್ಯ ಸರಕಾರ ಮೈಸೂರು ವಿವಿಗೆ ಹಸಿರು ನಿಶಾನೆ ತೋರಿಸಿದೆ. ಕೆಸೆಟ್ ಪರೀಕ್ಷೆ ಈ ಹಿಂದೆಯೇ ನಿಗಧಿಯಾಗಿತ್ತು. ಆದರೆ ಕೋವಿಡ್ ಕಾರಣದಿಂದ ಪರೀಕ್ಷೆ ನಡೆಸಲು ಸರಕಾರ ಅನುಮತಿ ನೀಡಿರಲಿಲ್ಲ. ಈ ಸಂಬಂಧ ಮೈಸೂರು ವಿವಿ ಕುಲಪತಿ ಪ್ರೊ ‌ಹೇಮಂತ್ ಕುಮಾರ್, ಹಲ ಬಾರಿ ಸರಕಾರಕ್ಕೆ ಪತ್ರ ಬರೆದು ಪರೀಕ್ಷೆ ನಡೆಸಲು ದಿನಾಂಕ ನಿಗಧಿಗೆ ಮನವಿ ಮಾಡಿದ್ದರು.ಇದೀಗ ಮೈಸೂರು ವಿವಿ ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿರುವ ಸರಕಾರ, ಸೆ.೨೦ ರ ಭಾನುವಾರದಂದು ಪರೀಕ್ಷೆ ನಡೆಸಲು ಸೂಚಿಸಿದೆ. : - – - . .20.